ದೇಶಭಕ್ತಿ ಎಂದರೇನು?
ಸಾರ್ವಜನಿಕ ದೃಷ್ಟಿಯಲ್ಲಿ ಭೂಮಿಗೆ ಮುತ್ತಿಡುವುದು, ಕೆಲವು ಕವಿಗಳು ರಚಿಸಿದ ಪದ್ಯಗಳನ್ನು ಸಾರ್ವಜನಿಕವಾಗಿ ಹಾಡುವುದು
ಮತ್ತು ಸಾರ್ವಜನಿಕವಾಗಿ ರಾಷ್ಟ್ರಧ್ವಜಕ್ಕೆ ನಮಸ್ಕರಿಸುವುದನ್ನು ಮಾಧ್ಯಮಗಳಲ್ಲಿ ದೇಶಭಕ್ತಿ ಎಂದು ಬಿಂಬಿಸಲಾಗಿದೆ. ಇದರಲ್ಲಿ
ಎಷ್ಟು ಭಾವಪೂರ್ಣತೆ ಇದೆ ಮತ್ತು ಹೆಚ್ಚಿನದನ್ನು ತೋರ್ಪಡಿಸುವುದಕ್ಕಾಗಿ ಮಾಡಲಾಗುತ್ತದೆ ಎಂಬುದು ನಮಗೆ ತಿಳಿದಿದೆ.
ನಿಜವಾದ ದೇಶಭಕ್ತಿ ಎಂದರೆ ದೇಶದ ನಕ್ಷೆ ಅಥವಾ ಭೌಗೋಳಿಕತೆಯನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ದೇಶದ ಜನರನ್ನು
ಪ್ರೀತಿಸುವುದು. ದೇಶದ ಜನತೆಗೆ ಕೈಲಾದ ಸೇವೆಯನ್ನು ಮಾಡಿ ಅವರ ಜೊತೆ ಸೌಹಾರ್ದಯುತವಾಗಿ ಬಾಳುವುದು ಮತ್ತು ಉತ್ತಮ
ಕಾರ್ಯಗಳನ್ನು ಮಾಡುವುದೇ ನಿಜವಾದ ದೇಶಭಕ್ತಿ. ದೇಶದ ಆರೋಗ್ಯ, ಶಿಕ್ಷಣ, ಉದ್ಯೋಗ ಮುಂತಾದವುಗಳ ಅಭಿವೃದ್ಧಿಗೆ
ನಿಸ್ವಾರ್ಥದಿಂದ ದುಡಿದು ಅವರನ್ನು ಸುಸಂಸ್ಕೃತ ಪ್ರಜೆಯನ್ನಾಗಿ ಮಾಡಲು ಕೈಲಾದ ಪ್ರಯತ್ನ ಮಾಡುವುದು ದೇಶದ ನಿಜವಾದ
ಸಂಕೇತ.
ದೇಶಕ್ಕೆ ಆಪತ್ತು, ಬಡತನ, ಕ್ಷಾಮ, ಅನ್ಯಾಯ, ಕರೋನದಂತಹ ಪಿಡುಗು ಅಥವಾ ಪ್ರಕೃತಿ ವಿಕೋಪಗಳು ಎದುರಾದಾಗ ಪ್ರಾಣ
ಭಯವಿಲ್ಲದೆ ದೇಶ ಬಿಟ್ಟು ಓಡಿಹೋಗದೆ ಅಲ್ಲೇ ಉಳಿದುಕೊಂಡು ಸಹಕರಿಸುವುದೇ ನಿಜವಾದ ದೇಶಭಕ್ತಿಯ ಉತ್ತುಂಗತೆ!
ಅಂತಹ ಭಾವಪೂರ್ಣ ದೇಶಪ್ರೇಮವು ಮಾನವ ಹೃದಯದಲ್ಲಿ ಬರಬೇಕಾದರೆ, ಸಹಜೀವಿಗಳ ಮೇಲೆ ಪ್ರೀತಿಯೂ, ನಂಬಿಕೆ ಮತ್ತು
ಧರ್ಮನಿಷ್ಠೆಯೂ ಮೂಲಭೂತ ಅವಶ್ಯಕತೆಗಳಾಗಿವೆ. ಇದನ್ನೇ ಇಸ್ಲಾಮಿನ ತತ್ವಶಾಸ್ತ್ರವು ನಮಗೆ ಕಲಿಸುತ್ತದೆ.
ಇಸ್ಲಾಮ್ ಎಂದರೆ 'ದೇವರಿಗೆ ತನ್ನನ್ನು ಸಮರ್ಪಿಸುವುದು'. ಅದನ್ನೇ ಜೀವನ ಕ್ರಮವಾಗಿ ಅಳವಡಿಸಿಕೊಂಡವರು ತಾವು ವಾಸಿಸುವ
ದೇಶವನ್ನು ಪ್ರೀತಿಸದೇ ಇರಲಾರರು.
ಸ್ವಂತ ಜನಾಂಗ, ಸ್ವಂತ ಭಾಷೆ, ವರ್ಣ, ಸ್ವಂತ ಧರ್ಮ ಎಂಬ ಭೇದ ಮರೆತು ದೇವನ ಧರ್ಮಕ್ಕೆ ಶರಣಾಗಿ ಎಲ್ಲ ಮನುಕುಲವನ್ನು
ಸಮಾನವಾಗಿ, ಸಹೋದರರಂತೆ ಕಾಣಬೇಕು ಎಂಬುದು ದೇವರು ಇಲ್ಲಿ ಕಲಿಸಿದ ಮೂಲ ಪಾಠ.
“ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಸೃಷ್ಟಿಸಿರುವೆವು.
ತರುವಾಯ, ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು.
ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು.” (ಖುರಾನ್
49:13)
ಸಹ ದೇಶವಾಸಿಗಳನ್ನು ಪ್ರೀತಿಸುವುದು ಸಹ ದೇವರನ್ನು ಪ್ರೀತಿಸಿದಂತೆಯೇ:
ಮತ್ತು ಇಸ್ಲಾಮ್ ಧರ್ಮವು ತನ್ನ ದೇಶವಾಸಿಗಳನ್ನು ಆರಾಧನೆಯ ಕ್ರಮವಾಗಿ ಪ್ರೀತಿಸಲು ಕಲಿಸುತ್ತದೆ.
"ನೀವು ಭೂಮಿಯಲ್ಲಿರುವ ಜನರನ್ನು ಪ್ರೀತಿಸಿದರೆ, ಸ್ವರ್ಗದಲ್ಲಿರುವ ದೇವರು ನಿಮ್ಮನ್ನು ಪ್ರೀತಿಸುತ್ತಾನೆ" ಮತ್ತು "ಜನರ ಮೇಲೆ
ಕರುಣೆ ತೋರಿಸದವನಿಗೆ ದೇವರು ಕರುಣೆ ತೋರಿಸುವುದಿಲ್ಲ" ಎಂಬುದು ಪ್ರವಾದಿ(ಸ)ಯವರ ಮಾತುಗಳು.
ಪರಲೋಕದಲ್ಲಿ ಇಸ್ಲಾಮಿನ ನಂಬಿಕೆ - ಅಂದರೆ ಭೂಮಿಯ ಮೇಲಿನ ದೇವರ ಆಜ್ಞೆಗಳನ್ನು ಪೂರೈಸಲು ಮಾಡಿದ ಯಾವುದೇ
ಕ್ರಿಯೆಯು ವ್ಯರ್ಥವಾಗುವುದಿಲ್ಲ. ಇಸ್ಲಾಮ್ ಧರ್ಮವನ್ನು ಅನುಸರಿಸುವವರಿಗೆ, ಪರಲೋಕದಲ್ಲಿ ದೇವರ ಬಳಿ ಪ್ರತಿಫಲ ಅಂದರೆ
ಸ್ವರ್ಗೀಯ ಜೀವನವಿದೆ ಎಂಬ ದೃಢವಾದ ನಂಬಿಕೆ ಅವರಲ್ಲಿದೆ. ಈ ನಂಬಿಕೆಯು ದೇಶವಾಸಿಗಳನ್ನು ಅನ್ಯಾಯ, ತಪ್ಪು ಮತ್ತು
ಅಪರಿಚಿತರ ದಾಳಿಯಿಂದ ರಕ್ಷಿಸಲು ಒಬ್ಬರ ಜೀವ ಮತ್ತು ಆಸ್ತಿಯನ್ನು ತ್ಯಾಗ ಮಾಡಲು ಉತ್ತಮ ಪ್ರೇರಣೆಯಾಗಿ
ಕಾರ್ಯನಿರ್ವಹಿಸುತ್ತದೆ. ಬಿಳಿಯರ ವಿರುದ್ಧ ಹೋರಾಡಿದ ಹುತಾತ್ಮರಾದ ಟಿಪ್ಪುಸುಲ್ತಾನ್, ಕುಂಜಾಲಿ ಮರೈಕಾಯರಂಥವರು
ಇದಕ್ಕೆ ಕೆಲವು ಉದಾಹರಣೆ.
ದುಶ್ಚಟಗಳಿಂದ ದೇಶವನ್ನು ರಕ್ಷಿಸುವುದು ಕೂಡ ಕರ್ತವ್ಯ
ಬಾಹ್ಯ ಬೆದರಿಕೆಗಳಿಂದ ಮಾತೃಭೂಮಿಯನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ಆಂತರಿಕ ಅಪರಾಧಗಳು, ಅನ್ಯಾಯಗಳು ಮತ್ತು
ಸಾಮಾಜಿಕ ದೌರ್ಜನ್ಯಗಳಿಂದ ದೇಶವಾಸಿಗಳನ್ನು ರಕ್ಷಿಸುವುದು ಕೂಡ ಅಷ್ಟೇ ಮುಖ್ಯ. ಆಗ ಮಾತ್ರ ದೇಶ ಶಾಂತಿಯ ನೆಲೆಯಾಗಲಿದೆ.
ಆದರೆ ನಮ್ಮ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ದತ್ತಾಂಶವು ದೇಶವು ಇಂದು ವಾಸಿಸಲು
ದ್ವೇಷಪೂರಿತ ಸ್ಥಳವಾಗಿ ಬದಲಾಗುತ್ತಿದೆ ಎಂದು ಎಚ್ಚರಿಸಿದೆ.
ಇಂದು ಪ್ರತಿನಿತ್ಯ ನಮ್ಮ ದೇಶದ ಪೊಲೀಸ್ ಠಾಣೆಗಳಲ್ಲಿ ಸರಿಸುಮಾರು 371 ಆತ್ಮಹತ್ಯೆಗಳು, 106 ಅತ್ಯಾಚಾರಗಳು ಮತ್ತು
8136 ಸಾಮಾನ್ಯ ಅಪರಾಧಗಳು ವರದಿಯಾಗುತ್ತಿವೆ. ಪೊಲೀಸ್ ಠಾಣೆಗಳಿಗೆ ವರದಿಯಾಗದ ಅಪರಾಧಗಳು ಐದು ಪಟ್ಟು ಹೆಚ್ಚು
ಎಂದು ಮತ್ತೊಂದು ಸಮೀಕ್ಷಾ ಸಂಸ್ಥೆ ವರದಿ ಮಾಡಿದೆ. ದಿನದಿಂದ ದಿನಕ್ಕೆ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದೆ ಎಂಬುದು
ನಮಗೆಲ್ಲರಿಗೂ ತಿಳಿದಿರುವ ಮತ್ತು ಅನುಭವಕ್ಕೆ ಬಂದಿರುವ ವಿಚಾರವಾಗಿದೆ.
ದೇಶವನ್ನು ರಕ್ಷಿಸುವುದು ನಮ್ಮ ಕರ್ತವ್ಯ
ಇಸ್ಲಾಮ್ ಕೇವಲ ಪ್ರಾರ್ಥನೆ, ಧ್ಯಾನ, ದಾನ, ಉಪವಾಸ ಮತ್ತು ಇತರ ಆಚರಣೆಗಳಿಗಷ್ಟೇ ಹೆಸರಾಗಿಲ್ಲ. ಬದಲಾಗಿ ಇಸ್ಲಾಮ್
ನಮ್ಮ ಸುತ್ತಲೂ ಒಳ್ಳೆಯದನ್ನು ಅಭಿವೃದ್ಧಿ ಪಡಿಸಲು ಮತ್ತು ದುಶ್ಚಟಗಳು ನಡೆಯದಂತೆ ತಡೆಯಲು ಪ್ರೋತ್ಸಾಹಿಸಬೇಕು
ಎಂಬುದನ್ನು ಒತ್ತಿ ಹೇಳುತ್ತದೆ.
ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು:
ನಿಮ್ಮಲ್ಲಿ ಯಾರಾದರೂ ಕೆಟ್ಟದ್ದನ್ನು ಕಂಡರೆ ಅವನು ಅದನ್ನು ತನ್ನ ಕೈಯಿಂದ ನಿಲ್ಲಿಸಬೇಕು. ಅವನು ಹಾಗೆ ಮಾಡಲು
ಸಾಧ್ಯವಾಗದಿದ್ದರೆ, ಅವನು ಮಾತಿನಿಂದಾದರೂ ಅದನ್ನು ತಡೆಯಬೇಕು. ಅವನು ಹಾಗೆಯೂ ಮಾಡಲು ಸಾಧ್ಯವಾಗದಿದ್ದರೆ, ತನ್ನ
ಹೃದಯದಿಂದಲಾದರೂ ಅದನ್ನು ದ್ವೇಷಿಸಬೇಕು, ಮತ್ತು ಇದುವೇ ನಂಬಿಕೆಯ ದುರ್ಬಲ ರೂಪವಾಗಿದೆ. (ಪಠ್ಯ: ಮುಸ್ಲಿಂ 78)
ಆದ್ದರಿಂದ, ವಿಶ್ವಾಸಿಗಳು ಸಾಧ್ಯವಾದಷ್ಟು ಕೆಟ್ಟದ್ದನ್ನು ವಿರೋಧಿಸಲು ನಿರ್ಬಂಧಿತನಾಗಿರುತ್ತಾನೆ. ಆದ್ದರಿಂದ ಪ್ರಸ್ತುತ
ಪರಿಸ್ಥಿತಿಯಲ್ಲಿ, ನಾವು ನೇರವಾಗಿ ನಮ್ಮ ಕೈಗಳಿಂದ ತಡೆಯಬಹುದಾದ ಆ ದುಷ್ಪರಿಣಾಮಗಳನ್ನು ನೇರವಾಗಿ ತಡೆಯಬೇಕು.
ನಮ್ಮ ದೇಶ ಇಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ನಾವು ಸಂವಿಧಾನಕ್ಕೆ ವಿರುದ್ಧವಾದ ಅನಿಷ್ಟಗಳ ವಿರುದ್ಧ ನಿಲುವು
ತೆಗೆದುಕೊಳ್ಳಬೇಕು. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ತೊಂದರೆ ಅಥವಾ ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವ
ಕಾರ್ಯಗಳನ್ನು ದೇವರು ಎಂದಿಗೂ ಅನುಮತಿಸುವುದಿಲ್ಲ ಮತ್ತು ನಾವು ಹಾಗೆ ಮಾಡಿದರೆ ಅದು ನಮ್ಮ ಪಾಲಿಗೆ ಪಾಪವೆಂದು
ದಾಖಲಾಗುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು.
ಕೆಡುಕುಗಳನ್ನು ತೊಡೆದುಹಾಕುವುದು ಹೇಗೆ?
ಸಮಾಜದಿಂದ ಕೆಟ್ಟದ್ದನ್ನು ತೊಡೆದುಹಾಕುವುದು ಹೇಗೆ ಎಂಬುದನ್ನೂ, ಆ ದುಷ್ಟತನವನ್ನು ಮಟ್ಟಹಾಕುವುದು ಹೇಗೆ
ಎಂಬುದನ್ನೂ ಮತ್ತು ದುಷ್ಟಶಕ್ತಿಗಳು ಸಮಾಜದಲ್ಲಿ ಅತಿರೇಕವಾಗಿ ಓಡುತ್ತಿರುವಾಗ ಅವುಗಳನ್ನು ಹೇಗೆ ನಿಯಂತ್ರಿಸಬೇಕೆಂದು
ಸರ್ವಶಕ್ತ ದೇವರು ನಮಗೆ ಕಲಿಸುತ್ತಾನೆ.
ಶಿಸ್ತು ಮೊದಲ ಹೆಜ್ಜೆ!
ಯಾರೂ ಇಲ್ಲ ಎಂಬ ಭಾವನೆ ಜನರಲ್ಲಿ ಹೆಚ್ಚಾಗಿದ್ದು, ದೇಶದಲ್ಲಿ ಅನೈತಿಕತೆ, ಅಪರಾಧಗಳು ತಾಂಡವವಾಡುತ್ತಿವೆ. ಲಂಚ,
ಭ್ರಷ್ಟಾಚಾರ, ವಂಚನೆ, ದರೋಡೆ, ಲೈಂಗಿಕ ದೌರ್ಜನ್ಯ, ಶಿಶುಹತ್ಯೆ, ವೃದ್ಧರ ದಯಾಮರಣ, ನಂಬಿಕೆ ದ್ರೋಹ ಇತ್ಯಾದಿಗಳನ್ನು
ವ್ಯಕ್ತಿಯ ಮನಪರಿವರ್ತನೆಯಿಂದ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯ. ವ್ಯಕ್ತಿ ಪರಿವರ್ತನೆಯಾಗಬೇಕಾದರೆ ನಿಜವಾದ ನಂಬಿಕೆ
ಮನುಷ್ಯನಲ್ಲಿ ಮೂಡಬೇಕು. ತನ್ನ ಸೃಷ್ಟಿಕರ್ತನಲ್ಲಿ ನಿಜವಾದ ನಂಬಿಕೆಯನ್ನು ತರ್ಕಕ್ಕೆ ಸ್ವೀಕಾರಾರ್ಹ ರೀತಿಯಲ್ಲಿ ಬಿತ್ತಬೇಕು.
ಅಂದರೆ, ಈ ಜಗತ್ತನ್ನು ಸೃಷ್ಟಿಸಿ ಕಾಪಾಡುವ ಸರ್ವಶಕ್ತ ದೇವರು ಒಬ್ಬನೇ ಎಂದೂ, ಅವನೊಬ್ಬನೇ ಆರಾಧನೆಗೆ ಅರ್ಹನಾದವನು
ಎಂದೂ, ಪರಲೋಕದಲ್ಲಿ ಮಾನವರು ಮಾಡಿದ ಪಾಪಗಳಿಗೆ ನರಕವೂ ಹಾಗೂ ಪುಣ್ಯಗಳಿಗೆ ಪ್ರತಿಫಲವಾಗಿ ಸ್ವರ್ಗವೂ
ಸಿಗುವುದಕ್ಕಾಗಿಯೇ ಇಹಲೋಕದ ಈ ತಾತ್ಕಾಲಿಕ ಜೀವನವನ್ನೇ ಪರೀಕ್ಷೆಯ ಸ್ಥಳವನ್ನಾಗಿಸಿದ್ದಾನೆ ಎಂದೂ ನಮ್ಮ ಮನಸ್ಸಿನಲ್ಲಿ
ಮೂಡಿಬರಬೇಕು. ಆಗ ಮಾತ್ರ ನಿಜವಾದ ಧರ್ಮನಿಷ್ಠೆ ಮೂಡುತ್ತದೆ.
ಭಕ್ತಿಯ ಮೂಲಕ ಸೃಷ್ಟಿಕರ್ತನನ್ನು ತಿಳಿಯೋಣ.
ಸೃಷ್ಟಿಕರ್ತನಾದ ದೇವರನ್ನು ಹೊರತುಪಡಿಸಿ, ಉಳಿದೆಲ್ಲವೂ ಆತನ ಸೃಷ್ಟಿಯಾಗಿದೆ. ದೇವರಲ್ಲದ್ದನ್ನು ತೋರಿಸಿ ದೇವರೆಂದು
ಹೇಳಿಕೊಟ್ಟರೆ ಮನುಷ್ಯ ಮನಸ್ಸಿನಿಂದ ದೇವರ ಮೇಲಿನ ಗೌರವ ಭಾವ ಮಾಯವಾಗುತ್ತದೆ. ತಡೆಯಲು ಯಾರೂ ಇಲ್ಲ ಎಂಬ
ಭಾವನೆ ಮೂಡಲು ಇದೇ ಮುಖ್ಯ ಕಾರಣ. ಇದು ಅಪರಾಧಗಳನ್ನು ಮಾಡಲು ಹೆದರದ ತಲೆಮಾರುಗಳನ್ನು ಸೃಷ್ಟಿಸುತ್ತದೆ. ಈ
ಪರಿಸ್ಥಿತಿಯನ್ನು ಬದಲಾಯಿಸಲು, ನಾವು ಸೃಷ್ಟಿಕರ್ತನ ನಿಜವಾದ ಗುಣಗಳನ್ನು ಕಲಿಸಬೇಕು ಮತ್ತು ಅವನನ್ನು ನೇರವಾಗಿ
ಆರಾಧಿಸಬೇಕು.
ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು). ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು. ಅವನಿಗೆ ಯಾರೂ
ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ. ಯಾರೂ ಅವನಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ. (ಖುರಾನ್ 112:1-4)
ಇಸ್ಲಾಮ್ ಈ ರೀತಿಯಾಗಿ ದೇವರ ಗುಣಲಕ್ಷಣಗಳನ್ನು ಅರ್ಥಮಾಡಿಸಿಕೊಟ್ಟು - ಮಧ್ಯವರ್ತಿಗಳಿಗೆ, ಮೂಢನಂಬಿಕೆಗಳಿಗೆ ಅಥವಾ
ವ್ಯರ್ಥವಾದ ಆಚರಣೆಗಳಿಗೆ ಅವಕಾಶ ನೀಡದೆ ನೇರವಾಗಿ ಅವನನ್ನು ಆರಾಧಿಸಬೇಕು ಎಂದು ಕಲಿಸುತ್ತದೆ. ಸೃಷ್ಟಿಕರ್ತನು ನನ್ನನ್ನು
ಎಲ್ಲಾ ಸಮಯದಲ್ಲಿಯೂ ಗಮನಿಸುತ್ತಿದ್ದಾನೆ ಎಂಬ ಪ್ರಜ್ಞೆಯನ್ನು ಮನುಷ್ಯನಲ್ಲಿ ಮೂಡಿಸಿದರೆ, ಅವನು ಬಾಹ್ಯ ಮತ್ತು ಗುಪ್ತ
ಪಾಪಗಳಿಂದ ದೂರವಿರುತ್ತಾನೆ. ಕನಿಷ್ಠ ಅವನು ಅವುಗಳನ್ನು ಮಾಡಲು ಹಿಂಜರಿಯುತ್ತಾನೆ. ಉದಾಹರಣೆಗೆ, ನಮ್ಮ ಯುವಕರಿಗೆ
ಈ ಭಾವನೆ ಬಂದರೆ ಏಕಾಂತದಲ್ಲಿ ಲೈಂಗಿಕ (ಪೋರ್ನ್) ವಿಡಿಯೋ ನೋಡುವುದಿಲ್ಲ.
ದೇವರ ನಿಯಮಗಳನ್ನು ಕಾರ್ಯಗತಗೊಳಿಸೋಣ!
ಅನಾನುಕೂಲತೆಗಳ ಹೆಚ್ಚಳಕ್ಕೆ ಮುಂದಿನ ಕಾರಣವೆಂದರೆ, ಸೃಷ್ಟಿಕರ್ತ ದೇವರು ಹಾಕಿದ ಜೀವನ ಯೋಜನೆಗಳು ಮತ್ತು
ಕಾನೂನುಗಳನ್ನು ನಿರ್ಲಕ್ಷಿಸುವುದು ಮತ್ತು ಮನುಷ್ಯನು ತನ್ನ ಸ್ವಂತ ಮನಸ್ಸಿನಲ್ಲಿ ರಚಿಸಿದುದನ್ನು ಕಾರ್ಯಗತಗೊಳಿಸುವುದು.
ಮನುಷ್ಯನ ಸ್ವಭಾವ ದೇವರಿಗೆ ಮಾತ್ರ ಗೊತ್ತು. ಆತನು ನಮಗಾಗಿ ರೂಪಿಸಿದ ಜೀವನ ಮತ್ತು ಅಪರಾಧ ಕಾನೂನುಗಳನ್ನು ಜಾರಿಗೆ
ತಂದರೆ, ದೇಶದಲ್ಲಿ ಅಪರಾಧಗಳು ಬಹಳ ಕಡಿಮೆಯಾಗುತ್ತವೆ. ಇಲ್ಲಿ ನಾವು ಲಂಚ ಮತ್ತು ವೇಶ್ಯಾವಾಟಿಕೆಗೆ ಸಂಬಂಧಿಸಿದ ಎರಡು
ಕಾನೂನುಗಳನ್ನು ಮಾತ್ರ ಉದಾಹರಣೆಗೆ ತೆಗೆದುಕೊಳ್ಳೋಣ.
ಇಂದು ನಮ್ಮ ದೇಶದಲ್ಲಿ ಲಂಚ, ವಂಚನೆ, ಕಳ್ಳತನ, ಕೊಲೆ, ದರೋಡೆ, ಲೈಂಗಿಕ ಅಪರಾಧಗಳು ಇತ್ಯಾದಿಗಳ ವಿಪರೀತ ಹೆಚ್ಚಳಕ್ಕೆ
ನಮ್ಮ ದೇಶದ ಕ್ರಿಮಿನಲ್ ಕಾನೂನುಗಳು ಬಹಳ ಸಹಾಯಕವಾಗಿವೆ. ಕಳ್ಳರು, ವಂಚಕರು ಮತ್ತು ವೇಶ್ಯೆಯರಿಗೆ ಕರುಣೆ ತೋರುವ
ರೀತಿಯಲ್ಲಿ ಅವು ನೆಲೆಗೊಂಡಿರುವುದರಿಂದ, ಕಳ್ಳರು ಮತ್ತೆ ಮತ್ತೆ ಕಳ್ಳತನ ಮಾಡುತ್ತಾರೆ, ಬಲಾತ್ಕಾರಿಗಳು ಮತ್ತೆ ಬಲಾತ್ಕಾರ
ಮಾಡುತ್ತಾರೆ, ಮುಂದುವರೆದು ಕೊಲೆಗಳಿಗೂ ಹೇಸುವುದಿಲ್ಲ ಮತ್ತು ಜೈಲಿನಿಂದ ಹೊರಬಂದಾಗ ನಿರ್ಭಯವಾಗಿ ನಡೆದು ಹೊಸ
ಕಲೆಗಳನ್ನು ಕಲಿಯುತ್ತಾರೆ. ಆದರೆ ದೇವರು ಒದಗಿಸಿದ ಕ್ರಿಮಿನಲ್ ಕಾನೂನು ಕಳ್ಳನು ತಪ್ಪಿತಸ್ಥನೆಂದು ಕಂಡುಬಂದಲ್ಲಿ ಆತನ
ಮುಂಗೈಯನ್ನು ಕತ್ತರಿಸಬೇಕೆಂದು ಆದೇಶಿಸುತ್ತದೆ ಹಾಗೂ ವ್ಯಭಿಚಾರಿಗಳಿಗೆ ಚಾವಟಿ ಅಥವಾ ಮರಣವನ್ನು ಸಹ ಆದೇಶಿಸುತ್ತದೆ.
ಈ ಶಿಕ್ಷೆಗಳನ್ನು ಸಾರ್ವಜನಿಕವಾಗಿ ಅಂದರೆ ಸರ್ವರ ಸಮ್ಮುಖದಲ್ಲಿ ನಡೆಸುವಂತೆ ಕೇಳಲಾಗುತ್ತದೆ!
ಇವುಗಳನ್ನು ಇಂದು ಅಳವಡಿಸಿ ನೇರ ಪ್ರಸಾರ ಮಾಡಿದರೆ ಏನಾಗಬಹುದು? ಸ್ವಲ್ಪ ಯೋಚಿಸಿ! ಕಳ್ಳರು ಮತ್ತು ದಂಧೆಕೋರರಿಗೆ
ಸತ್ಯವಾದ ಶಿಕ್ಷೆಯಾಗುವುದಲ್ಲದೆ, ಇದು ದೇಶವಾಸಿಗಳಿಗೆ ಪಾಠವಾಗುತ್ತದೆ. ಈ ಕಾನೂನು ಜಾರಿಗೆ ಬಂದರೆ, ನೀವು ಇಂದು
ಕಾಣುತ್ತಿರುವಂತೆ ಅತಿರೇಕದ ಅಪರಾಧಗಳನ್ನು ಅಥವಾ ದೇಶದ ಜನರನ್ನು ಭಯಭೀತರನ್ನಾಗಿಸಿ ಬದುಕುತ್ತಿರುವ ಅಪರಾಧಿಗಳು
ಮತ್ತು ಭ್ರಷ್ಟರನ್ನೂ ನೀವು ನೋಡಲು ಸಾಧ್ಯವಿಲ್ಲ.
ಹಾಗಾಗಿ ಈ ಭೂಮಿಯಲ್ಲಿ ಶಾಂತಿಯುತವಾಗಿ ಹಾಗೂ ದೇಶರಕ್ಷಕರಾಗಿ ಬದುಕಲು ದೇವರು ನಮಗೆ ನೀಡಿದ ಜೀವನ ತತ್ವವೇ
ಇಸ್ಲಾಮ್. ಇದು ವೈಯಕ್ತಿಕ ಶಿಸ್ತನ್ನು ಆಧರಿಸಿದೆ. ದೇವರು ತನ್ನ ಅಂತಿಮ ಗ್ರಂಥವಾದ ಪವಿತ್ರ ಖುರಾನ್ ಮೂಲಕ ಮತ್ತು ತನ್ನ
ಸಂದೇಶವಾಹಕ ಪ್ರವಾದಿ ಮುಹಮ್ಮದ್ ಅವರ ಜೀವನ ಅಭ್ಯಾಸದ ಮೂಲಕ ಜನರು ಶಾಂತಿ ಮತ್ತು ಸದಾಚಾರವನ್ನು ಸ್ಥಾಪಿಸಲು
ಸಹಾಯ ಮಾಡುವಂತೆ ಜಗತ್ತಿಗೆ ಕರೆ ನೀಡಿದ್ದಾನೆ ಎಂದು ಸಂಶೋಧಕರು ತಿಳಿಯಬಹುದು! ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ
ಪರಕೀಯರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಈ ದಿನಗಳಲ್ಲಿ ಭಾರತವನ್ನು ನೈತಿಕ ಅಧಃಪತನದಿಂದ ರಕ್ಷಿಸುವ ಮತ್ತು ನಿಜವಾದ
ಪ್ರಯೋಜನಕಾರಿ ದೇಶವಾಗಿಸುವ ಪ್ರತಿಜ್ಞೆ ಮಾಡೋಣ.
ಧನ್ಯವಾದಗಳೊಂದಿಗೆ,
“ಮಾರ್ಗದರ್ಶಿ” – ಮಾಸಿಕ ನಿಯತಕಾಲಿಕ
ಪತ್ರಿಕೆಯನ್ನು ಸ್ವೀಕರಿಸಲು ಬಯಸುವವರು ನಿಮ್ಮ ವಿಳಾಸಗಳನ್ನು 7090544445 ಗೆ SMS ಮಾಡಬಹುದು
=====================
ಉಡುಗೊರೆಯಾಗಿ ಕನ್ನಡ ಪವಿತ್ರ ಖುರಾನ್ ಪ್ರತಿಗಾಗಿ:
9008076543
===================
HOUSE OF PEACE,
PO Box 1726, BANGALORE 560017
9008076543, 9886001357
No comments:
Post a Comment